ಸರ್ಕಾರದ ಮಹತ್ವದ ನಿರ್ಧಾರ: ಈಗ ನೀವು ಚಾರ್ಟರ್ಡ್ ವಿಮಾನಗಳಲ್ಲೂ ಪ್ರಯಾಣಿಸಬಹುದು

ವಿಮಾನವು ಹೊರಡುವ ಕನಿಷ್ಠ 45 ನಿಮಿಷಗಳ ಮೊದಲು ಪ್ರಯಾಣಿಕರನ್ನು ವಿಮಾನ ನಿಲ್ದಾಣ, ಹೆಲಿಪೋರ್ಟ್ ಅಥವಾ ಹೆಲಿಪ್ಯಾಡ್‌ಗೆ ತಲುಪಿಸಬೇಕು.  

Last Updated : May 26, 2020, 12:52 PM IST
ಸರ್ಕಾರದ ಮಹತ್ವದ ನಿರ್ಧಾರ: ಈಗ ನೀವು ಚಾರ್ಟರ್ಡ್ ವಿಮಾನಗಳಲ್ಲೂ ಪ್ರಯಾಣಿಸಬಹುದು title=

ನವದೆಹಲಿ: ಕರೋನಾ ವೈರಸ್ ಕೋವಿಡ್ -19 (Covid-19)  ಸೋಂಕನ್ನು ತಪ್ಪಿಸಲು ನೀವು ಸಾಮಾನ್ಯ ಪ್ರಯಾಣಿಕರ ಹಾರಾಟದಲ್ಲಿ ಹೋಗಲು ಬಯಸದಿದ್ದರೆ ಈಗ ನೀವು ನಿಮ್ಮ ಜೇಬಿಗೆ ಅನುಗುಣವಾಗಿ ಖಾಸಗಿ ವಿಮಾನವನ್ನು ಸಹ ಕಾಯ್ದಿರಿಸಬಹುದು. ಹೌದು ಜನಸಾಮಾನ್ಯರೂ ಸಹ ಖಾಸಗಿ ಚಾರ್ಟರ್ಡ್ ವಿಮಾನಗಳನ್ನು ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ನಿಗದಿತ ಮತ್ತು ಖಾಸಗಿ ನಿರ್ವಾಹಕರ ಹೆಲಿಕಾಪ್ಟರ್‌ಗಳು ಮೇ 25 ರಿಂದ ದೇಶೀಯ ವಿಮಾನಗಳಿಗಾಗಿ ಸಣ್ಣ ವಿಮಾನಗಳನ್ನು ನಿರ್ವಹಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಚಾರ್ಟರ್ಡ್ ಹೆಲಿಕಾಪ್ಟರ್‌ಗೆ ಪ್ರಯಾಣಿಕರು ಕೌಂಟರ್‌ನಿಂದ ಟಿಕೆಟ್ ಕಾಯ್ದಿರಿಸಿದರೆ, ಬೋರ್ಡಿಂಗ್ ಪಾಸ್ ಅನ್ನು ಯಾವುದೇ ಕನಿಷ್ಠ ಸಂಪರ್ಕವಿಲ್ಲದೆ ಹೆಲಿಪ್ಯಾಡ್ ಅಥವಾ ಹೆಲಿಪೋರ್ಟ್‌ನಲ್ಲಿ ನೀಡಬೇಕು ಮತ್ತು ಈ ಸಮಯದಲ್ಲಿ ಸ್ಥಳೀಯ ಆಡಳಿತವು ಶುದ್ಧೀಕರಣದ ಎಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂದು ಸಚಿವಾಲಯ ತಿಳಿಸಿದೆ. 

ವಿಮಾನ ಹೊರಡುವ ಮುನ್ನ ಕನಿಷ್ಠ 45 ನಿಮಿಷಗಳ ಮೊದಲು ಪ್ರಯಾಣಿಕರನ್ನು ವಿಮಾನ ನಿಲ್ದಾಣ, ಹೆಲಿಪೋರ್ಟ್ ಅಥವಾ ಹೆಲಿಪ್ಯಾಡ್‌ಗೆ ತಲುಪಿಸಬೇಕು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಮಾರ್ಗಸೂಚಿಗಳು "ವಯಸ್ಸಾದವರು, ಗರ್ಭಿಣಿಯರು ಮತ್ತು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವಂತಹ ಸೋಂಕಿನ ಹೆಚ್ಚಿನ ಅಪಾಯದಲ್ಲಿರುವವರು ಪ್ರಯಾಣಿಸುವುದನ್ನು ತಪ್ಪಿಸಲು ಸೂಚಿಸಲಾಗಿದೆ" ಎಂದು ಹೇಳಿದರು. ಆದಾಗ್ಯೂ ಏರ್ ಆಂಬುಲೆನ್ಸ್ ವಿಷಯದಲ್ಲಿ ಈ ಸಮಾಲೋಚನೆ ಅನ್ವಯಿಸುವುದಿಲ್ಲ.

ನಾಗರಿಕ ವಿಮಾನಯಾನ ನಿರ್ದೇಶನಾಲಯ ಜನರಲ್ (DGCA) ದೇಶೀಯ ವಿಮಾನಗಳ ಟಿಕೆಟ್‌ಗಳ ಗರಿಷ್ಠ ಬೆಲೆಯನ್ನು ನಿಯಂತ್ರಿಸುವ ನಿಯಮಗಳು ಚಾರ್ಟರ್ಡ್ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. 

ಮಾರ್ಗಸೂಚಿಗಳಲ್ಲಿ "ಆಪರೇಟರ್ ಮತ್ತು ಪ್ರಯಾಣಿಕರ ಪರಸ್ಪರ ಒಪ್ಪಿಗೆಯ ಮೇಲೆ ವಿಮಾನ ಪ್ರಯಾಣದ ಶುಲ್ಕವನ್ನು ನಿರ್ಧರಿಸಲಾಗುತ್ತದೆ" ಎಂದು ಹೇಳಿದರು. ಇವುಗಳಲ್ಲದೆ ಉಳಿದ ನಿಯಮಗಳು ಪ್ರಯಾಣಿಕರಿಗೆ ಮತ್ತು ದೇಶೀಯ ವಾಣಿಜ್ಯ ವಿಮಾನಗಳಿಗಾಗಿ ನಿರ್ವಾಹಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ ಎನ್ನಲಾಗಿದೆ.
 

Trending News